ತಾಯಿಯ ಸೇವೆಯ ಕಾರಣ ಸ್ವರ್ಗದಲ್ಲಿ ಉನ್ನತ ಸ್ಥಾನ




ಬೀವಿ ಆಯಿಷಾ(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, "ಮಲಗುವಾಗ ನಾನು ಸ್ವರ್ಗಕ್ಕೆ ಪ್ರವೇಶಿಸಿದಾಗಿ ಕನಸು ಕಂಡೆ. ಅಲ್ಲಿ ನಾನು ಕುರ್'ಆನ್ ಪಾರಾಯಣ ಮಾಡುವುದು ಕೇಳಿದೆ.  ನಾನು ಕೇಳಿದೆ, ಇದು ಯಾರು? ಮಲಕುಗಳು ಹೇಳಿದರು, "ಹಾರಿಸತ್ ಬ್ನ್ ನುಅ್'ಮಾನ್(ರ.ಅ) ಎಂಬವರಾಗಿದ್ದಾರೆ ಅದು. ಪ್ರವಾದಿﷺ ಸ್ವಹಾಬಿಗಳಲ್ಲಿ ಹೇಳಿದರು, "ಹಾರಿಸತ್(ರ‌.ಅ) ಆ ಮಹೋನ್ನತ ಸ್ಥಾನ ಪಡೆದದ್ದು ಅವರು ಮಾಡಿದ ಸತ್ಕಾರ್ಯದ ಫಲದಿಂದಾಗಿದೆ. ಆ ಸ್ವಹಾಬಿ ತನ್ನ ತಾಯಿಗೆ ಒಳ್ಳೆಯ ರೀತಿಯಲ್ಲಿ ಸೇವೆ ಮಾಡುತ್ತಿದ್ದರು." [ಶುಹುಬುಲ್ ಈಮಾನ್: 7467]

✍🏻 ಶಂಸುದ್ದೀನ್ ಬಾಖವಿ ಹೊಸತೋಟ

28/08/2021
ಶನಿವಾರ, ಮುಹರ್ರಂ  19, 1443
ಚಿಙ್ಙಂ 11,  1196